ನನಗೆ ಕವನ ಬರೆಯುವ ಆಸಕ್ತಿ ಹುಟ್ಟಿದ್ದು ಕಾಲೇಜು ದಿನಗಳಲ್ಲಿ. ಆಗ ಅದನ್ನು ನಾನಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾಲೇಜು ಮುಗಿದ ತಕ್ಷಣವೇ ಬದುಕು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಹೊಸ ಬದುಕಿಗೆ ಹೊಂದಿಕೊಳ್ಳುವ ಹೆಣಗಾಟದಲ್ಲಿ ನನ್ನ ಯಾವ ಹವ್ಯಾಸಗಳಿಗೂ ಪ್ರಾಮುಖ್ಯತೆ ಕೊಡಲಾಗಲಿಲ್ಲ. ಸುಮಾರು ೭,೮ ವರ್ಷಗಳ ಸುದೀರ್ಘ ಅಂತರದ ನಂತರ ನನ್ನನ್ನು ನಾನು ಹುಡುಕಿ ತೆಗೆಯುವ ಪ್ರಯತ್ನ ಮಾಡಿದೆ. ಎಲ್ಲ ಹಿರಿಯ ಕವಿಗಳ ಪ್ರಭಾವ, ಸಾಹಿತ್ಯದಲ್ಲಿ ನನಗಿರುವ ಆಸಕ್ತಿ, ನನ್ನ ಜೀವನಾನುಭವ, ಗೆಳೆಯ, ಗೆಳತಿಯರ ನಡುವಿನ ಒಡನಾಟ, ಬಾಲ್ಯ ಈ ಎಲ್ಲದರ ಉತ್ಪ್ರೇಕ್ಷೆಯ ಸಮ್ಮಿಶ್ರಣವೇ ನನ್ನೀ ಕವನ ಸಂಕಲನ.
No comments:
Post a Comment